ಜಗದೀಶ್ವರ್ ಮಂದಿರ್, ಪೊವಾಯ್, ಮುಂಬಯಿ.

ಈ ಮಂದಿರ ೧೯೫೩ ರಲ್ಲಿ ಶ್ರೀ ಚಿನ್ಮಯಾನಂದ ಸರಸ್ವತಿ ಪರಮಹಂಸರ (ಬಾಲ್ಯದ ಹೆಸರು ಬಾಲಕೃಷ್ಣ ಮೆನನ್) ಹಸ್ತದಿಂದ ಉದ್ಘಾಟಿಸಲ್ಪಟ್ಟಿತ್ತು. ಮಂದಿರದ ಆಕೃತಿ ಮತ್ತು ಪೂಜಾವಿಧಾನಗಳಲ್ಲಿ ಕೆಲವು ವೈವಿಧ್ಯತೆಗಳನ್ನು ಕಾಣಬಹುದು.

ಸ್ವಾಮಿಗಳಮೇಲೆ ಸಾಂಚಿ ಸ್ತೂಪ, ಹಾಗೂ ಇಸ್ಲಾಮ್ ಧರ್ಮದ ಕೆಲವು ತತ್ವಗಳು ಹೆಚ್ಚು ಪರಿಣಾಮ ಬೀರಿರುವುದನ್ನು ಶಿಲ್ಪದಲ್ಲಿ ಗುರುತಿಸಬಹುದು.

don

ಚಿನ್ಮಯಾನಂದರು, ತಮ್ಮ ಜೀವನದ ಬಹುಪಾಲು ಸಮಯವನ್ನು ತಮ್ಮ ತಾಯ್ನಾಡು ಕೇರಳದಲ್ಲಿ ಕಳೆಯದೆ, ಉತ್ತರ-ಮಧ್ಯ ಭಾರತದಲ್ಲಿ ಕಳೆದರು. “ಗೀತಾ ಜ್ಞಾನ ಯಜ್ಞ” ಎನ್ನುವ ಹೆಸರಿನಡಿಯಲ್ಲಿ ಅವರು ಭಗವದ್ಗೀತೆಯನ್ನು ಸಾಮಾನ್ಯ ಜನರ ಬುದ್ಧಿಗೆ ಎಟುಕುವಂತೆ ಸರಳೀಕರಿಸಿದ್ದು ಅವರ ಬಹುಮುಖ್ಯ ಕೊಡುಗೆಗಳಲ್ಲೊಂದು.

ಮುಂಬಯಿ ನಗರದ ಪವಾಯಿಜಿಲ್ಲೆಯಲ್ಲಿರುವ ‘ಜಗದೀಶ್ವರ ಮಂದಿರ’ ಚಿಕ್ಕ ಬೆಟ್ಟದಮೇಲೆ ಇದೆ. ಪೂಜ್ಯ ಚಿನ್ಮಯಾನಂದರು ಇದನ್ನು ಸ್ಥಾಪಿಸಿದರು. ದೇವಸ್ಥಾನದ ‘ಜಗದ್ವಾರ’ವೆಂದು ಕರೆಯಲಾಗುತ್ತಿರುವ ಮುಖದ್ವಾರ ಸಾಂಚಿಯ ಬೌಧ್ದ ಸ್ತೂಪದ ನಮೂನೆಯಲ್ಲಿದೆ. ದ್ವಾರದ ಎರಡು ಬೃಹದ್ ಕಂಬಗಳ ಬಗ್ಗೆ ಶಿವಪುರಾಣದ ಕೆಲವು ಪ್ರಸಂಗಗಳ ಉಲ್ಲೇಖವಿದೆ. ಕಲ್ಲಿನ ಕೆತ್ತನೆ ಕೆಲಸ ಉತ್ಕೃಷ್ಟ ಮಟ್ಟದ್ದು. ೩ ದೊಡ್ಡ ಗಾತ್ರದ ಕಲ್ಲಿನ ತೊಲೆಗಳನ್ನು ಕಂಬಗಳಮೇಲೆ ಇಡಲಾಗಿದೆ. ೨ ನೆಯ ಕಂಬದ ಮಧ್ಯದಲ್ಲಿ ಪವಿತ್ರ ಕುರಾನಿನ ಉಲ್ಲೇಖವಿದೆ. “Through me you stand in the presence of the Lord of the Universe”. ೩ ನೆಯ ಕಂಬದ ಮಧ್ಯಭಾಗದಲ್ಲಿ ಒಂದು ದೊಡ್ಡ ಗಂಟೆಯನ್ನುಕೆಳಗೆ ತೂಗುಬಿಡಲಾಗಿದೆ. ಒಟ್ಟಿನಲ್ಲಿ ದ್ವಾರವು ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆ, ಮತ್ತು ಜಾತ್ಯತೀತ ಅರಬ್ ಪರಂಪರೆಗಳ ಪ್ರಭಾವವನ್ನು ದರ್ಶಾಯಿಸುತ್ತದೆ. ಬೌಧ್ದ ಧರ್ಮದ ಛಾಪು, ಜಗದ್ವಾರದ ಶಿಲ್ಪ ಕಲಾಕೃತಿಯಮೇಲೆ ಗಾಢವಾಗಿ ಎದ್ದು ಕಾಣುತ್ತದೆ. 

ವಿಶ್ವದ ಸ್ಥಿತಿ-ಲಯಗಳ ವ್ಯಾಪಾರಲ್ಲಿ ಶಿವನೇ ಆರಾಧ್ಯ ದೇತೆ, ಅಮೃತಶಿಲೆಯ ಮೂರ್ತಿ ಅಮೃತಶಿಲೆಯ ಸಮಾಧಿಯಮೇಲೆ ಧ್ಯಾನಾಸಕ್ತನಾಗಿ ಕುಳಿತಿರುವಂತಿದೆ. ಬಲಗಡೆ ಕೃಷ್ಣ ಮೂರ್ತಿ, ವೇಣುಗೋಪಾಲನಾಗಿ ಅವನ ಎಡಭಾದಲ್ಲಿ ಗಂಗಾಮಾತೆ ಒಂದು ಕೊಡದಿಂದ ಧಾರೆಯಂತೆ ಶಿವಲಿಂಗದಮೇಲೆ ಬೀಳುವ ದೃಷ್ಯ ಸುಂದರವಾಗಿದೆ.

ಗರ್ಭಗುಡಿ ಕೆಳಗೆ, ಭೊಮಿಯ ಮಟ್ಟದಲ್ಲಿದೆ. ಶಿವಲಿಂಗಕ್ಕೆ ಪ್ರತಿದಿನವೂ ಅಭಿಷೇಕ, ಪೂಜೆ, ಅರ್ಚನೆಗಳನ್ನು ಮಾಡಲಾಗುತ್ತದೆ. ಧ್ಯಾನ ಮಾಡುತ್ತಿರುವ ಗಣೇಶನ ವಿಗ್ರಹ ಗುಡಿಯ ಪರಿಕ್ರಮದ ಮಾರ್ಗದಲ್ಲಿ ಹಿಂಭಾಗದಲ್ಲಿದೆ.

ಶಿವಮೂರ್ತಿಯ ಹಿಂಭಾಗದಲ್ಲಿ ಕಪ್ಪು ಶಿಲೆಯ ನಂದಿ, ಈಶ್ವರನಿಗೆ ಅಭಿಮುಖವಾಗಿದೆ. ‘ವಿಶ್ ಪಾಂಡ್ ‘ನಲ್ಲಿ ತಮ್ಮ ಕಾಣಿಕೆ ಅರ್ಪಸಿ ಬೇಡುವವರ ಮನೋಇಷ್ಟಾರ್ಥಗಳನ್ನು ಗಮನಿಸಿ,ನಂದಿ, ಆಶೀರ್ವದಿಸುತ್ತದೆ. ದೇಗುಲದ ಗುಮ್ಮಟ ಎತ್ತರ ೩೪ ಅಡಿ;  ಆ ಮೂರು ಭಾಗಗಳು ಹೀಗಿವೆ :  ೧. ಚೌಕಾಕಾರ,೨. ವೃತ್ತಾಕಾರ (ಶಿವಲಿಂಗ) ಅಷ್ಟಕೋನಾಕಾರ (೮ ಹೆಡೆಗಳ ಸರ್ಪ, ಪಂಚಮಹಾಭೂತಗಳು, ಭೂಮಿ, ವಾಯು, ಬೆಂಕಿ, ನೀರು, ಆಕಾಶ) ಪ್ರಮುಖ ದೇವಾಲಯದ ಒಳಗಿನವಿಶಾಲ ಚೌಕಾಕಾರದ ಹಾಲಿನಲ್ಲಿ, ಶ್ರೀ ಶಂಕರಾಚಾರ್ಯರಿಂದ ಹಿಡಿದು, ಆದಿಗುರು ದಕ್ಷಿಣಾಮೂರ್ತಿ, ಪರಂಪರೆಯಲ್ಲಿ ಬಂದ ಯತಿಗಳ ವಿಗ್ರಹ/ಫೋಟೋಗಳಿವೆ.  ಇವೆಲ್ಲಾ ಕಪ್ಪು ಕಲ್ಲಿನ ಮೂರ್ತಿಗಳು.

do

ಮಂದಿರದ ಮುಂಭಾಗದಲ್ಲಿಯೇ ಒಂದು ಭಾರಿ ಆಕಾರದ ನೀಲಾಂಜನವಿದೆ. ಇದನ್ನು ಕೂರ್ಮನಮೇಲೆ ಸ್ಥಾಪಿಸಲಾಗಿದೆ. ನಮ್ಮ ಮನಸ್ಸನ್ನು ಜೀವನದ ವಿಷಯಾಸಕ್ತಿಯಿಂದ ಮೀರಿ ಹೊರಗೆ ಬರುವ ಭಾವನೆಗೆ ಸಾಕ್ಷಿಯಾಗಿದೆ. ಪ್ರತಿವರ್ಷವೂ ಮಹಾಶಿವರಾತ್ರಿಯಂದು ಅಖಂಡನಾಮ ಜಪ, ಆರಾಧನೆ ಇದೆ. ಆ ಸಮಯದಲ್ಲಿ ಸಾವಿರಾರು ಭಕ್ತರು ದೂರದೂರಗಳಿಂದ ಬಂದು ಜಗದೀಶ್ವರನ ಕೃಪೆಗೆ ಪಾತ್ರರಾಗುತ್ತಾರೆ. 

ಚಿನ್ಮಯಾನಂದರು (ಮೇ ೮, ೧೯೧೬ – ಅಗಸ್ಟ್ ೩, ೧೯೯೩)

ಪಂಡಿತರಲ್ಲದವರಿಗೆ ಭಾರತದ ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಭಗವದ್ಗೀತೆ, ಮೊದಲಾದ ಉದ್ಗ್ರಂಥಗಳು ಕಬ್ಬಿಣದ ಕಡಲೆಯಾಗಿತ್ತು. ವಿದೇಶಿಯರೂ ಬಹಳ ಆಸಕ್ತರಾಗಿದ್ದು ಅವರಿಗೆ ಸುಲಭವಾಗಿ ಅರ್ಥ ತಿಳಿಸಬಲ್ಲ ವ್ಯಕ್ತಿಗಳು ವಿರಳವಾಗಿದ್ದರು. ‘ಭಗವದ್ಗೀತೆ’ಯನ್ನು ನಮ್ಮ ದಿನಚರಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಮನವರಿಕೆ ಮಾಡಿಕೊಟ್ಟ ಮಹನೀಯರು ಅವರು ಪಂಚಮವೇದವೆಂದೇ ಹೆಸರಾದ ‘ಭಗವದ್ಗೀತೆ’ಯ ಕುರಿತಾದ ಗೀತಾಜ್ಞಾನ ಯಜ್ಞಗಳೆಂಬ ಉಪನ್ಯಾಸಗಳು, ಪುಸ್ತಕಗಳು ಹೀಗೆ ಭಗವದ್ಗೀತೆಯಲ್ಲಿ ಮತ್ತು ಭಾರತೀಯ ಅಧ್ಯಾತ್ಮಿಕ ತತ್ವದಲ್ಲಿ ಜನಾಸಕ್ತಿಯನ್ನು ಮೂಡಿಸಿದ ಸೇವೆಗಳು ಅದ್ವಿತೀಯವಾದದ್ದು. ಭಗವದ್ಗೀತೆಯನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ಬೋಧಿಸಿ ಅದನ್ನು ಜನಪ್ರಿಯಮಾಡಿದರು.

ಚಿನ್ಮಯಾನಂದರ ಜನನ, ವಿದ್ಯಾಭ್ಯಾಸ :  ವಡಕ್ಕೆ ಕರುಪ್ಪತ್ತ ಕುಟ್ಟನ್ ಮೆನನ್, ಹಾಗೂ ಪರುಕುಟ್ಟಿ ಅಮ್ಮ ದಂಪತಿಗಳ ಪ್ರೀತಿಯ ಮಗನಾಗಿ ಬಾಲಕೃಷ್ಣ ಕೇರಳದ ಎರ್ನಾಕುಲಂ ನಲ್ಲಿ ಜನಿಸಿದರು. ತಾಯಿ ಅವರ ೫ ನೇ ವಯಸ್ಸಿನಲ್ಲಿ ಮೃತರಾದರು.

* ಕೊಚ್ಚಿಯಶ್ರೀ ರಾಮವರ್ಮ ಹೈ ಸ್ಕೂಲ್ (೧೯೨೧-೧೯೨೮)
* ಎಫ್. ಎ ; ವಿವೇಕೋದಯಂ ಸ್ಕೂಲ್ ತ್ರಿಶೂರ್ (೧೯೨೮-೧೯೩೨)
* ಮಹಾರಾಜಾ ಕಾಲೇಜ್ ಎರ್ನಾಕುಲಂ (೧೯೩೨-೩೪)
* ಬಿ. ಎ , ಸೇಂಟ್ ಥಾಮಸ್ ಕಾಲೇಜ್ ತ್ರಿಶೂರ್ (೧೯೩೫-೧೯೩೭)
* ಇಂಗ್ಲಿಷ್ ಸಾಹಿತ್ಯ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, ಲಕ್ನೋ ವಿಶ್ವವಿದ್ಯಾಲಯ (೧೯೪೦-೧೯೪೩) ಪತ್ರಿಕೋದ್ಯಮ *ದೇಶದ ಸ್ವಾತಂತ್ರ್ಯಕ್ಕಾಗಿನ ಹೋರಾಟಕ್ಕಿಳಿದ ಅವರು ಬ್ರಿಟಿಷ್ ಸರ್ಕಾರದಿಂದ ಕಾರಾಗೃಹಕ್ಕೆ ತಳ್ಳಲ್ಪಟ್ಟರು. ಸೆರೆಮನೆಯಿಂದ ಹೊರ ಬಂದ ಅವರು * ‘ದಿ ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸತೊಡಗಿದ್ದರು.*೧೯೩೬ ನಲ್ಲಿ ರಮಣ ಮಹರ್ಷಿ (೧೮೭೯-೧೯೫೦) ಯವರನ್ನು ಭೆಟ್ಟಿಮಾಡಿದರು.

ವೇದಾಂತ ದರ್ಶನ, ಹಾಗು ಭಗವದ್ಗೀತೆ ಮೊದಲಾದ ಗ್ರಂಥಗಳನ್ನು ಅರಿಯುವುದು ಅವರ ಮನಸ್ಸಿನ ಅಂತರಂಗದ ಆಶೆಯಾಗಿತ್ತು. ಹಿಮಾಲಯಕ್ಕೆ ಹೋಗಿ, ಸ್ವಾಮಿ ಶಿವಾನಂದರನ್ನು ಭೇಟಿಮಾಡಿದರು. ಅವರ ದೈವೀತೇಜಸ್ಸು, ವೇದಾಂತದ ಬೋಧನೆಗಳು ಈ ಯುವ ಬಾಲನ ಮೇಲೆ ಅಪಾರವಾದ ಪರಿಣಾಮ ಬೀರಿದವು. ಅಂತರಂಗಿಕವಾಗಿ ಅಪೂರ್ವವಾದ ಬದಲಾವಣೆಗಳು ತೆರೆದುಕೊಳ್ಳಲಾರಂಭಿಸಿದವು. ಹೀಗಾಗಿ ಅವರು ತಮ್ಮ ಸ್ವಯಂ ಬದುಕಿನ ಮೂಲ ಉದ್ದೇಶದ ಕಡೆಗೆ ತಮ್ಮನ್ನೇ ಪ್ರಶ್ನಿಸಲಾರಂಭಿಸಿ ಅದಕ್ಕೆ ತಕ್ಕ ಉತ್ತರ ಸಿಗದೇ ಪರಿತಪಿಸುತ್ತಿದ್ದರು;  ಶಾಶ್ವತವಾದ ಸುಖದ ಒಳಗುಟ್ಟೇನಿರಬಹುದು, ಎಂಬ ಕುರಿತು ಸಾಕಷ್ಟು ಸಂಶೋಧನೆ ಮಾಡಿದರು. ಸುಪ್ರಸಿದ್ದ ಯೋಗಿಗಳ ಸಾಂಗತ್ಯ, ಮತ್ತು ಅವರ ಬೋಧನೆಗಳನ್ನು ಕೇಳುವುದರ ಜೊತೆ ಜೊತೆಗೆ ಸ್ವಯಂ ತಾವೇ ಬಿಡುಗಡೆಯ ಹಾದಿಯನ್ನೂ ಆಯ್ದುಕೊಂಡರು.

ಬಾಲಕೃಷ್ಣ ಸನ್ಯಾಸ ಸ್ವೀಕರಿಸಿದರು :

ಫೆಬ್ರುವರಿ ೨೫, ೧೯೪೯ರ ಶಿವರಾತ್ರಿಯ ದಿನದಂದು ಬಾಲಕೃಷ್ಣ ಮೆನನ್ ಅವರು ಸ್ವಾಮಿ ಶಿವಾನಂದರಿಂದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ಅವರಿಗೆ ‘ಸ್ವಾಮಿ ಚಿನ್ಮಯಾನಂದ ಸರಸ್ವತಿ’ ಎಂಬ ಹೆಸರನ್ನಿಟ್ಟರು. ಚಿನ್ಮಯವೆಂಬುದು ಪರಿಶುದ್ಧವಾದ ಅರಿವು (pure consciousness) ಎಂಬುದರ ಸೂಚಕವಾಗಿದೆ.ಸ್ವಾಮಿ ಶಿವಾನಂದರು ಬಾಲಕೃಷ್ಣನನ್ನು ಹೆಚ್ಚಿನ ಮಾರ್ಗದರ್ಶನಕ್ಕಾಗಿ ಹಿಮಾಲಯದ ಉತ್ತರಕಾಶಿಯಲ್ಲಿದ್ದ ಆಗಿನ ಕಾಲದ ಶ್ರೇಷ್ಠ ವೇದಾಂತಿಗಳಾದ ಸ್ವಾಮಿ ತಪೋವನಂ ಅವರ ಬಳಿ ಕಳುಹಿಸಿಕೊಟ್ಟರು. ಸ್ವಾಮಿ ತಪೋವನಂ ಅವರು ಶಿಷ್ಯರನ್ನು ಆರಿಸಿಕೊಳ್ಳುವ ಪರಿ, ಬಹಳ ಕ್ಲಿಷ್ಟಕರವಾಗಿತು. ಕಟ್ಟುನಿಟ್ಟಾದ ನಿಬಂಧನೆಗಳಳ್ಳಿ ಗೆದ್ದವರು ಮಾತ್ರ ಅವರ ಶಿಷ್ಯವೃತ್ತಿಯಲ್ಲಿ ಸಿದ್ಧಿಪಡೆಯುತ್ತಿದ್ದರು. ಚಿನ್ಮಯಾನಂದರು ಈ ಮಹಾನ್ ಸಂತರಾದ ಸ್ವಾಮಿ ತಪೋವನಂ ಅವರ ಶಿಷ್ಯರಾಗಿ ಸಕಲಸಂಗ ಪರಿತ್ಯಾಗಿಗಳಾಗಿ ವೇದಾಂತದ ಆಳವಾದ ಅಧ್ಯಯನವನ್ನು ಕೈಗೊಂಡರು (೮ ವರ್ಷ)

ಸ್ವಾಮಿ ತಪೋವನಂ ಅವರ ಮಾರ್ಗದರ್ಶನದ ಜೊತೆಗೆ ಗಂಗಾಮಾತೆಯ ಪರಿಶುದ್ಧ ಹರಿವು ಮತ್ತು ಮಾನವಕುಲಕ್ಕಾಗಿನ ಆಕೆಯ ನಿತ್ಯ ಸೇವಾಹರಿವಿನಲ್ಲಿ ಪುನೀತರಾಗಿ ಆಧ್ಯಾತ್ಮಿಕ ಅನುಭಾವವನ್ನು ಪಡೆದುಕೊಂಡ ಸ್ವಾಮಿ ಚಿನ್ಮಯಾನಂದರು, ತಮ್ಮ ಗುರುವಿನಿಂದ ಜನಸಾಮಾನ್ಯರಿಗೆ ವೇದಾಂತದ ಸುಜ್ಞಾನವನ್ನು ತಲುಪಿಸಬೇಕೆಂಬ ಆದೇಶವನ್ನು ಪಡೆದರು. ಭಾರತದಲ್ಲೆಲ್ಲಾ ತಿರುಗಿ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಅವನತಿಯನ್ನು ವ್ಯಾಪಕವಾಗಿ ಕಂಡಿದ್ದ ಸ್ವಾಮಿ ಚಿನ್ಮಯಾನಂದರಿಗೆ ತಾವು ಪಡೆದ ಜ್ಞಾನ ಮತ್ತು ಸಂತೃಪ್ತ ಭಾವವನ್ನು ಎಲ್ಲೆಡೆ ಕೊಂಡೊಯ್ಯಬೇಕೆಂಬ ಮಹದಾಶೆಯಾಯಿತು.

ಆಧ್ಯಾತ್ಮಿಕ ಜ್ಞಾನದ ಪ್ರಸಾರ :

ಮೊದಲು ಈ ಕಾರ್ಯ ಅವರು ತಿಳಿದಷ್ಟು ಸುಲಭವಾಗಿರಲಿಲ್ಲ. ಚಿನ್ಮಯಾನಂದರು ಬ್ರಾಹ್ಮಣರಾಗಿಲ್ಲದೆ ಇರುವುದು ಅಡಚಣೆಗೆ ಪ್ರಮುಖ ಕಾರಣವಾಗಿತ್ತು. ಉಚ್ಚಜಾತಿಯ ವರ್ಗದವರು ಅವರ ವೇದಾಂತ ಉಪದೇಶಗಳನ್ನು ಸ್ವೀಕರಿಸಲು ಸಿದ್ಧರಾಗಿರಲಿಲ್ಲ. ಆದರೆ ಚಿನ್ಮಯಾನಂದರ ವರ್ಚಸ್ಸು, ಅಪಾರ ಜ್ಞಾನ, ಮತ್ತು ಬೋಧನಾಕ್ರಮ, ಭಕ್ತಗಣಕ್ಕೆ ಬಹಳ ಪ್ರಿಯವಾಯಿತು. ನಂತರ ಎಲ್ಲಾ ವರ್ಗದ ಜನರೂ ಅವರ ಶಿಷ್ಯರಾದರು.

ಗೀತಾ ಯಜ್ಞ :

ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶಗಳಿಗೆ “ಜ್ಞಾನ ಯಜ್ಞ”ವೆಂಬ ಉಲ್ಲೇಖವಿದೆ. ದಿವ್ಯ ಜ್ಞಾನವನ್ನು ಗಳಿಸಲು ಒಬ್ಬ ನಿಷ್ಠಾವಂತ ಶ್ರದ್ಧಾಳು ನಡೆಸುವ ಶ್ರದ್ಧಾವಂತ ಶಾಸ್ತ್ರಾಧ್ಯಯನಕ್ಕೆ ‘ಯಜ್ಞ’ವೆಂದು ಹೆಸರು. ಸ್ವಾಮಿ ಚಿನ್ಮಯಾನಂದರು ತಮ್ಮ ಮೊದಲ ಜ್ಞಾನಯಜ್ಞವೆಂಬ ಸರಣಿ ಉಪನ್ಯಾಸಗಳನ್ನು ೧೯೫೧ರ ಡಿಸೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದ ಪುಣೆನಗರದ ಚಿಕ್ಕ ದೇವಸ್ಧಾನವೊಂದರಲ್ಲಿ ನಡೆಸಿಕೊಟ್ಟರು.

ಚಿನ್ಮಯ ಮಿಷನ್ :

ಸ್ವಾಮಿ ಚಿನ್ಮಯಾನಂದರ ಉಪನ್ಯಾಸಗಳು, ವೇದಗಳ ಅಧ್ಯಯನ, ಮತ್ತು ಸ್ವಯಂ ನೇರ ಅನುಭಾವಗಳಿಂದ ಶ್ರೀಮಂತವಾಗಿದ್ದವು. ಕಾಲಾನುಕ್ರಮದಲ್ಲಿ ಸ್ವಾಮಿ ಚಿನ್ಮಯಾನಂದರ ಸೃಜನಶೀಲ, ವಿವೇಕಯುಕ್ತ, ಸಂವೇದನಾಶೀಲ ಮತ್ತು ಹಾಸ್ಯದ ಲೇಪನವನ್ನುಳ್ಳ ಆಕರ್ಷಕ ಶೈಲಿಯ ಉಪನ್ಯಾಸಗಳು ವಿಶ್ವದೆಲ್ಲೆಡೆಯಿಂದ ಸಹಸ್ರಾರು ಜನರನ್ನಾಕರ್ಷಿಸತೊಡಗಿದವು. ಈ ಭಕ್ತರಲ್ಲಿ ಯುವಕರು, ವಯಸ್ಕರು, ಹೆಣ್ಣುಮಕ್ಕಳು, ವೃದ್ಧರು, ವಿದೇಶಿಯರು, ಮೊದಲಾದ ಎಲ್ಲಾ ವರ್ಗದ ಜನರಿದ್ದರು. ಹೀಗೆ ಬೆಳೆದ ಅವರ ಅಭಿಮಾನೀ ಬಳಗವು 1953ರಲ್ಲಿ ’ಚಿನ್ಮಯ ಮಿಷನ್’ ಎಂಬ ಸಂಘಟನೆಗೆ ಚಾಲನೆಯನ್ನು ನೀಡಿತು.

ವಿಶ್ವದಾದ್ಯಂತ ತಮ್ಮನ್ನರಸಿ ಬಂದ ಆಸಕ್ತರಿಗೆಲ್ಲಾ ಸ್ವಾಮಿ ಚಿನ್ಮಯಾನಂದರು ಅತ್ಯಂತ ಪ್ರೀತಿಯಿಂದ ಬೋಧಿಸತೊಡಗಿದರು. ಆಗಸ್ಟ್ ೩, ೧೯೯೩ರಲ್ಲಿ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ‘ಸನ್ನಿವೇಲಿ’ ಎಂಬ ಊರಿನಲ್ಲಿದರು. ಆಗ ಮೇಲಿಂದಮೇಲೆ ಅವರಿಗೆ ಹೃದಯಾ ಘಾತಗಳಾದವು. ಒಳ್ಳೆಯ ವೈದ್ಯಕೀಯ ಸೌಲಭ್ಯಗಳು ದೊರೆತಾಯಿತಾದರೂ ಚೇತರಿಸಿಕೊಳ್ಳದೆ ದೈವಾಧೀನರಾದರು.

ಚಿನ್ಮಯಾನಂದರು ವಿಶ್ವದಾದ್ಯಂತ ಸಂಚರಿಸಿ ೫೭೬ಜ್ಞಾನ ಯಜ್ಞಗಳನ್ನೂ, ಅಸಂಖ್ಯಾತ ಆಧ್ಯಾತ್ಮಿಕ ಶಿಬಿರಗಳನ್ನೂ ನಡೆಸಿ, ಪ್ರತ್ಯಕ್ಷವಾಗಿ, ಮತ್ತು ಪರೋಕ್ಷವಾಗಿ, ಕೋಟ್ಯಾಂತರ ಹೃದಯಗಳನ್ನು ಸಂವೇದಿಸಿದರು.’ಚಿನ್ಮಯ ಮಿಷನ್ ಸಂಘಟನೆ’ಯು ಒಂದು ಮಹತ್ವದ ಸಾಮಾಜಿಕ ಸೇವೆಯ ಕೇಂದ್ರವಾಗಿ ಅತ್ಯುತ್ತಮಕ ಸಂಘಟನೆಯಾಗಿ ಬೆಳೆಯಿತು ಆಧ್ಯಾತ್ಮಿಕ ಔನ್ನತ್ಯಗಳ ಜೊತೆ ಜೊತೆಗೆ ವಿದ್ಯಾಭ್ಯಾಸ, ಬಡತನ ನಿವಾರಣೆ, ವೈದ್ಯಕೀಯ ಮತ್ತು ನೂರಾರು ಸಮಾಜಸೇವಾ ಕಾರ್ಯಗಳಲ್ಲಿ ತನ್ನದೇ ಆದ ರೀತಿಯ ಕೊಡುಗೆಗಳನ್ನು ನೀಡುತ್ತಾ ಮುಂದೆ ಸಾಗಿದೆ. ಸ್ವಾಮಿ ಚಿನ್ಮಯಾನಂದರ ಬದುಕು, ಒಂದು ಅಸಾಮಾನ್ಯ ಅಧ್ಯಾತ್ಮ ಶಕ್ತಿ, ಮತ್ತು ಸೇವಾ ಕೇಂದ್ರ ಬಿಂದುವಾಗಿ ಪರಿಣಮಿಸಿತು.  

n

f

20180827_173252

 

Advertisements

ಮುಂಬಯಿನಲ್ಲಿ “ಸ್ಕಂದ ಷಷ್ಠಿ ಮಹೋತ್ಸವ”ವನ್ನು ಅತ್ಯಂತ ಶ್ರದ್ಧಾ-ಭಕ್ತಿ-ಸಂಭ್ರಮಗಳಿಂದ ಆಚರಿಸಲಾಯಿತು.

Link of the Pooja Video :  https://photos.app.goo.gl/PCeWcPfsgCLjmtzm9

green

ge

mela

DSC01833

DSC01842

This slideshow requires JavaScript.

hosadu

hosahosadu

2018

201

20

ಮುಂಬಯಿಮಹಾನಗರದ ಉಪನಗರಗಳಲ್ಲೊಂದಾದ ಛೆಡ್ಡಾನಗರದ ಶ್ರೀ ನಾಗ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ “

ಶ್ರೀ ಸ್ಕಂದ ಷಷ್ಠಿ ಮಹೋತ್ಸವ” ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಚೆಂಬೂರಿನ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರ ಮಾರ್ಗದರ್ಶನದಲ್ಲಿ ೧೩ ನೇ  ತಾರೀಖು ಡಿಸೆಂಬರ್ ೨೦೧೮ ರಂದು ಜರುಗಿದವು. ಪೂಜಾವಿಧಿಗಳು:
ನೈರ್ಮಲ್ಯ ವಿಸರ್ಜನೆ, ಅಭಿಷೇಕ, ಸಾಮೂಹಿಕ ಆಶ್ಲೇಷಾ ಬಲಿ, ಸಾಮೂಹಿಕ ಕಾಳಸರ್ಪ ಶಾಂತಿ, ಮಹಾಭಿಷೇಕ.

ಮದ್ಯಾನ್ಹ :

೨ ಗಂಟೆಗೆ ಮಾಹಾಪೂಜೆ, ತೀರ್ಥಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆಯಿತು. ನಂತರ, ಭಜನಾವೃಂದ, ಭರತನಾಟ್ಯ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಠದ ಸುತ್ತಲೂ ಇರುವ ರಸ್ತೆಗಳಲ್ಲಿ ಪಲ್ಲಕ್ಕಿ ಉತ್ಸವ,  ಪಂಚವಾದ್ಯ,ಚೆಂಡೆ, ನಾಗಸ್ವರ, ವೇದಘೋಷ, ತೊಟ್ಟಿಲು ಪೂಜೆ, ಮಂಗಳಾರತಿ, ತೀರ್ಥ-ಪ್ರಸಾದ ನಡೆಯಿತು. ಸಹಸ್ರಾರು ಭಕ್ತಾದಿಗಳು ಶ್ರೀ ಸ್ಕಂದ ಷಷ್ಠಿ ಮಹಾಪೂಜೆಯಲ್ಲಿ ಪಾಲ್ಗೊಂಡು, ವಿವಿಧ ಹರಕೆ ಸೇವೆಗಳನ್ನು ಸಲ್ಲಿಸಿ, ಪರಮಾತ್ಮನ ಪ್ರೀತಿಗೆ ಪಾತ್ರರಾದರು.

ಶುಕ್ರವಾರ, ೧೪, ೨೦೧೮ ರ ಪೂಜಾಕಾರ್ಯಕ್ರಮ :

೮ ಗಂಟೆಗೆ ಪಂಚಾಮೃತ ಅಭಿಷೇಕ, ಪಂಚವಿಂಶತಿ, ಕಲಶಪೂರ್ವಕ ಸಂಪ್ರೋಕ್ಷಣೆ, ಹಾಗೂ ಮಾಹಾಪೂಜೆ,
ಸಂಜೆ : ೬-೩೦ ಕ್ಕೆ ಭರತನಾಟ್ಯ  ಕಾರ್ಯಕ್ರಮ : “ಕನಕಸಭಾ ಪರ್ಫಾಮೆನ್ಸ್ ಆರ್ಟ್ ಸೆಂಟರ್ ಮುಂಬಯಿ” ನ ಗುರು ಶಿಷ್ಯರಿಂದ ಸಾದರಪಡಿಸುವುದಿದೆ.

ರಾತ್ರಿ : ೭-೩೦ ಕ್ಕೆ ರಂಗಪೂಜೆ ಹಾಗೂ ಪ್ರಸಾದ ವಿನಿಯೋಗ.

ಧಾರ್ಮಿಕ ವಿಧಿ-ವಿಧಾನಗಳು :
ಕೃಷ್ಣರಾಜ ಉಪಾದ್ಯಾಯ ವಾಮಂಜೂರು, ಗುರುರಾಜ ಭಟ್ ನಾರಾವಿ,  ಪ್ರಸಾದ್ ಭಟ್ ರವರ ಪೌರೋಹಿತ್ಯ,  ಶ್ರೀಧರ ಭಟ್, ಮತ್ತು ಅರ್ಚಕ ವೃಂದದ ಸಹಕಾರಗಳೊಂದಿಗೆ.

ಮಠದ ವ್ಯವಸ್ಥಾಪಕರು : ಶ್ರೀ ವಿಷ್ಣು ಕಾರಂತ್

ತಾ.೫ ನೇ ನವೆಂಬರ್, ೨೦೧೮ : ಮಗಳು ಜಾನಕಿ ಧಾರಾವಾಹಿಯ ಬಗ್ಗೆ !

ಸದ್ಯದಲ್ಲೇ ದಾವಣ್ಗೆರೆಯಲ್ಲಿ ಈ ಕತೆ ಡೈರೆಕ್ಟೃ, ‘ಸಂವಾದ’ ನಡೆಸ್ತಾರೆ ಅಂತ ಸುದ್ದಿಯಿದೆ. ನಮ್ಮ ಎಂಕ್ಟೇಸಪ್ಪ ಒಂದ್ಸಲ ನನ್ನ ಕೇಳೆಬಿಟೃ. ನಾನೂ ದಾವಣ್ಗೆರೆ ಓಗ್ಲಾ ಎಂಗೆ ?

ಈ ತಿಂಗಳ ೧೮ ನೇ ತಾರೀಖು, ಡಾವಣ್ಗೆರೆ ನಲ್ಲಿ ಮಗಳು ಜಾನಕಿ ಧಾರಾವಾಹಿಯ ಸಂವಾದ ನಡೆಸ್ತಿದಾರೆ. ಆದರಲ್ಲಿ ಭಾಗಿಯಾಗುವ ಆಸೆ, ನಮ್ಮ ಎಂಕ್ಟೇಸಪ್ಪನವರಿಗೆ ಪ್ರಬಲವಾಗಿ ಕಾಡ್ತಿದೆ. ಅದಕ್ಕೆ ನನಗ್ ಹೇಳಿದೃ ! ನಾನಿರೋದು ಮುಂಬೈನಲ್ಲಿ ಅವರೇ ಹೋಗಬಹುದು ಅನ್ಸತ್ತೆ. ಹೊಳಲ್ಕೆರೆಗೂ ದಾವಣಗೆರೆಗೂ ೩೭ ಕಿ.ಮೀ ದೂರ ಅಷ್ಟೆ.
ನಾನು ಫೋನ್ ನಲ್ಲೇ ಅವರ ಜೊತೆ ‘ಸಂವಾದ’ ನಡಸ್ದೆ. ಅದರ ತುಣುಕು ಇಲ್ಲಿದೆ ಓದಿ.


“ಸಿಎಸ್ಪಿ, ಜಂಗಮ್ದುರ್ಗದಲ್ಲಿ ಮನೆಮಾಡ್ಕಂಡವ್ರೆ. ಒಳಲಕೆರೆ ಏನ್ ದೂರಾನ ? ಅಂಗೆ ತಾಳ್ಯದ ಅನುಮಪ್ಪಂಗೂ ಕೈಮುಗಿ ಬರಬೈದು”. “ಶ್ಯಾಮಲಮ್ಮವೃ ನಿಮಿಷಾಂಬ ಅನ್ನೋ ಗುಡಿಗೆ ಓಗ್ತಾರೆ. ನಮ್ಮ ಒಳಲಕೆರೆ ಗಣೇಶ್ ನ್ ಗುಡಿಗೊಂದ್ಸಲ ಬಂದು ಅಣ್ಣು- ಕಾಯಿ ಮಾಡಸ್ಕೊಂಡ್ ಓಗ್ಲಿ ನೋಡಿ, ಅವ್ರ್ ಯಜಾಮಾನೃ ಸಿಕ್ಕೇ ಸಿಗ್ತಾರೆ” ! ಗ್ಯಾರಂಟಿ. “ಇದನ್ನ ಏಳೋರ್ ಯಾರು, ನನಗ್ ಓಗೀ ಸಿತಾರಾಮ್ ಗೆ ಏಳಕ್ಕೆ ಏನೋ ಬ್ಯಾಸ್ರ ಕಣಪ್ಪ; ಏನ್ ಮಾಡ್ಲಿ ಅಂತ ಯೋಚಿಸ್ತಿವ್ನಿ” !

ನಾನೂ, ಎಂಕ್ಟೇಸಪ್ಪರು ವಾಟ್ಸ್ ಅಪ್ ನಲ್ಲಿ ಮಾತುಕತೆ ಆಡ್ತೀವಿ. ನಾನಿರೋದು ಮುಂಬೈನಲ್ಲಿ ಎಂಕ್ಟೇಸಪ್ಪರು ಹೊಳಲ್ಕೆರೆಯಲ್ಲಿ. ನಮ್ಮ ನೆರೆಹೊರೆಯವರು.ಇವತ್ಗೂ ಅದೇ ವಿಶ್ವಾಸ, ಪ್ರೀತಿ ಇಟ್ಕಂಡು ಮಾತಾಡಿಸ್ತಾರೆ.

ನಾನು : ಏನು ಎಂಕ್ಟೇಸಪ್ಪಾರು ಸ್ವಲ್ಪ ಒಳ್ಳೆ ಮೂಡ್ನಲ್ಲಿ ಇರೋಹಂಗಿದೆ. ಎಷ್ಟು ದಿನ ಆಯುತು ನಿಮ್ಜೊತೆ ಮಾತಾಡಿ ?
ಎಂಕ್ಟೇಸಪ್ಪಾರು: ಅಂಗೇನಿಲ್ಲ. ಯಾಕೋ ಜಾನಕಮ್ಮನ್ ಬದ್ಕ್ ನೆನೆಸ್ಕೊಂಡ್ರೆ ಕಣ್ಣಗೆ ನಿರ್ ಬರ್ತದೆ. ಆನಂದಪ್ಪ ಒಳ್ಳೆ ಮೋಸಗಾರ. ಆಮ್ಯಾಗೆ ಆ ನಿರಂಜನಪ್ಪನೂ ಅಂಗೆ ಅಂತ ಅನ್ಕೊಂಡೈತೆ ಆ ಮಗ. ಅಸ್ವಿನಂತ ಉಡ್ಗಿ. ಏನೂ ತಿಳ್ಯಾಯಿಲ್ಲ. ಎಲೄ ಆಯಮ್ಮಂಗೆ ಮ್ವಾಸಮಾಡೋರೆ.
ನಾನು : ಈಗೆಲ್ಲ ಸರಿಹೋಯತಲ್ಲ ಸಮಾಧಾನ ಮಾಡ್ಕಳ್ಳಿ.
ಎಂಕ್ಟೇಸಪ್ಪಾರು: ಈಗ್ಲೂ ಆಯಮ್ಮ ಒಂದ್ಕಡೆ ಕುಂತ್ಗಂಡು ಕಣ್ಣೀರ್ ಸುರಸ್ತವ್ಳೆ ಪಾಪ.
ನಾನು : ನೋಡಿ ಇನ್ನೂ ಜಾನಕಿ ತನ್ನ ಮೊದ್ಲಿನ ಪರಿಸ್ಥಿತಿಗೆ ಬಂದಿಲ್ಲ. ಅವ್ಳಿಗೇ ನಿರಂಜನವರ್ದೆ ಎದಿರ್ಕೆ. ಎಲ್ಲಿ ಡೈವರ್ಸ್ ಗೆ ಇಲ್ಲಾ ಅಂದ್ಬಿಡ್ತಾರೋ ಅಂತವ.  ಅದೆಂಗ್ ಹೇಳಕ್ಕಾಗತ್ತೆ. ಇನ್ನೂ ಒಬ್ಬರ್ನೊಬೃ ಭೇಟಿಮಾಡಿಲ್ಲ ವಿಚಾರ್ಸ್ಕೊಂಡಿಲ್ಲ. ತಡೀರಿ ಆಯಪ್ಪ ಏನ್ ಹೇಳ್ತಾರೆ ಅನ್ನೋದ್ ಕೇಳೋಣ. ಇದಲ್ದೆ. ಅವರಾಗ್ಲೆ ವಕೀಲ್ರ್ನ ಭೇಟಿಮಾಡಿ ಬಂದಿದಾರೆ. ಸಿ.ಎಸ್.ಪಿ. ಜಾನಕಿ ಕೈಲಿ ಕಂಪ್ಲೇಂಟ್ ಕೊಡ್ಸಿ ನಿರಂಜನನ ಜೈಲಿಗೆ ಕಳಿಸಕ್ಕೆ ರೆಡಿ ಆಗಿದಾರೆ. ಮನೆಯೋಗೆಲ್ಲಾ ಭಾಳ ಬೇಜಾರಾಗಿದೆ. ಚಂಚಲಾಗೆ ಸಿಟ್ಟು ನೆತ್ತಿಗೇರಿದೆ. ಅವ್ರ್ ಭಾವನ್ನ ನೋಡಿ ಏನ್ ಬೈತಾಳೋ ಗೊತ್ತಿಲ್ಲ.

ಮಧು ವಿದೇಶಕ್ಕೆ ಹೋಗೋದು ಶ್ಯಾಮಲಮ್ಮನಿಗೆ ಇಷ್ಟ ಇಲ್ಲ. ಆದ್ರೆ, ಮನೇಲೆ ಇದ್ರೆ ಜಾನಕಮ್ಮನ್ ವಿಷ್ಯ ಅವಾಗ-ಇವಾಗ ಕಿವೀಲಿ ಬೀಳುತ್ತೆ. ತಂದೆ-ಅತ್ತೆ ಅಳೋದು, ಗುಸು-ಗುಸು ಮಾತಾಡೊದು ಮಧುಗೆ ವಿಚಿತ್ರವಾಗಿ ಕಾಣ್ಸತ್ತೆ. ಅವನ್ನ ಫಾರಿನ್ ಗೆ ಕಳ್ಸೋದೆ ವಾಸಿ, ಅಂತ ಡೈರೆಕ್ಟರ್ ನಿರ್ಧರಿಸ್ಬಹುದು.

ಭಾರ್ಗಿ ಮಾತಾಡ್ರಲ್ಲಿ ನಿಸ್ಸೀಮ. ಅವನ್ ಮಾತ್ ಜಾನಕಿ ಕೇಳಿ ದಂಗಾಗಿದಾಳಿ. ಸಿ.ಎಸ್.ಪಿ. ಮೇಲೆ ಅವಳಿಗೂ ಕೋಪಬಂದಿರಬೋದು.
ಶ್ಯಾಮಲಮ್ಮನಿಗೆ ದಿಕ್ಕೇ ತೋಚದಂತಾಗಿದ್ರೆ ಆಶ್ಚರ್ಯ ಇಲ್ಲ. ಇಷ್ಟಾದೃ ಟೀಎನ್ಸೀ ಅವರು ನಿರಂಜನನನನ್ನು ಸಿ.ಎಸ್.ಪಿ.ಪರಿವಾರದ ಹತ್ರ ಹೋಗ್ದಂತೆ ಜಾಗರೂಕತೆಯಿಂದ ಕಾಪಾಡ್ತಿದಾರೆ.

ಅಕ್ಷಯ ತೃತೀಯ ಹಬ್ಬದ ಮಹತ್ವ :

ಚಿ. ರಾಘವೇಂದ್ರ ದಂಪತಿಗಳು ಹೊಸಮನೆ ಕಟ್ಟಲು ತೊಡಗಿರುತ್ತಾರೆ. ಅವರಿಗೆ ನಮ್ಮ ಶುಭಕಾಮನೆಗಳು ! ಹಿ೦ದೂ ಧರ್ಮೀಯರಲ್ಲಿ ಅಕ್ಷಯ ತದಿಗೆಯು ವರ್ಷದ ಅತ್ಯ೦ತ ಮ೦ಗಳಕರವಾದ ದಿನಗಳ ಪೈಕಿ ಒ೦ದೆ೦ದು ಪರಿಗಣಿಸಲಾಗುತ್ತದೆ. ಹೊಸ ವ್ಯಾಪಾರೋದ್ಯಮವನ್ನಾರ೦ಭಿಸುವುದು, ಹೊಸ ಮನೆ ಕಟ್ಟುವುದು ,ಹೊಸ ಮನೆಯನ್ನು ಪ್ರವೇಶಿಸುವುದು, ಅಥವಾ ಮದುವೆ ಮಾಡಿಕೊಳ್ಳುವುದು, ಹೀಗೆ ಎಲ್ಲಾ ವಿಧವಾದ ಶುಭಕಾರ್ಯಗಳನ್ನೂ ಕೂಡಾ ಈ ಹಿ೦ದೂ ಹಬ್ಬದ ದಿನದ೦ದು ಯಾವುದೇ ಹಿ೦ಜರಿಕೆಯಿಲ್ಲದೇ ಕೈಗೊಳ್ಳಬಹುದಾಗಿದೆ. ಸಾಧಕರಿಗೆ ಹಾಗೂ ಶುಭಕಾರ್ಯಗಳ ಆರಂಭಕ್ಕೆ ಇದು ಅತ್ಯಂತ ಪ್ರಶಸ್ತವಾದ ದಿನ. ವೈಶಾಖ ಶುಕ್ಲ […]

via ಅಕ್ಷಯ ತೃತೀಯ ಹಬ್ಬದ ಮಹತ್ವ : — dinapratidina

ಅಕ್ಷಯ ತೃತೀಯ ಹಬ್ಬದ ಮಹತ್ವ : — dinapratidina

ಚಿ. ರಾಘವೇಂದ್ರ ದಂಪತಿಗಳು ಹೊಸಮನೆ ಕಟ್ಟಲು ತೊಡಗಿರುತ್ತಾರೆ. ಅವರಿಗೆ ನಮ್ಮ ಶುಭಕಾಮನೆಗಳು ! ಹಿ೦ದೂ ಧರ್ಮೀಯರಲ್ಲಿ ಅಕ್ಷಯ ತದಿಗೆಯು ವರ್ಷದ ಅತ್ಯ೦ತ ಮ೦ಗಳಕರವಾದ ದಿನಗಳ ಪೈಕಿ ಒ೦ದೆ೦ದು ಪರಿಗಣಿಸಲಾಗುತ್ತದೆ. ಹೊಸ ವ್ಯಾಪಾರೋದ್ಯಮವನ್ನಾರ೦ಭಿಸುವುದು, ಹೊಸ ಮನೆ ಕಟ್ಟುವುದು ,ಹೊಸ ಮನೆಯನ್ನು ಪ್ರವೇಶಿಸುವುದು, ಅಥವಾ ಮದುವೆ ಮಾಡಿಕೊಳ್ಳುವುದು, ಹೀಗೆ ಎಲ್ಲಾ ವಿಧವಾದ ಶುಭಕಾರ್ಯಗಳನ್ನೂ ಕೂಡಾ ಈ ಹಿ೦ದೂ ಹಬ್ಬದ ದಿನದ೦ದು ಯಾವುದೇ ಹಿ೦ಜರಿಕೆಯಿಲ್ಲದೇ ಕೈಗೊಳ್ಳಬಹುದಾಗಿದೆ. ಸಾಧಕರಿಗೆ ಹಾಗೂ ಶುಭಕಾರ್ಯಗಳ ಆರಂಭಕ್ಕೆ ಇದು ಅತ್ಯಂತ ಪ್ರಶಸ್ತವಾದ ದಿನ. ವೈಶಾಖ ಶುಕ್ಲ […]

via ಅಕ್ಷಯ ತೃತೀಯ ಹಬ್ಬದ ಮಹತ್ವ : — dinapratidina

ತಿರುಮಂತ್ರ !

ಜಿ.ಪಿ.ರಾಜರತ್ನಂ, ಕನ್ನಡದ ಒಬ್ಬ ಹೆಸರಾಂತ ಕವಿಗಳಲ್ಲೊಬ್ಬರು. ಕವನಗಳು, ಕಥೆಗಳು ಮಕ್ಕಳ ಸಾಹಿತ್ಯ, ಮತ್ತು ಹಲವಾರು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಕನ್ನಡದ ಆಡುಭಾಷೆಯಲ್ಲಿ ಗ್ರಾಮೀಣ ಪ್ರದೇಶದ ಬಳಕೆಯಲ್ಲಿರುವ ಹಲವಾರು ಪ್ರಯೋಗಗಳನ್ನು ಅತ್ಯಂತ ಸಮರ್ಪಕವಾಗಿ ಮಾಡಿ, ಜನರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಜೈನಸಾಹಿತ್ಯದಲ್ಲಿ ಮಹತ್ವದ ಕೊಡುಗೆಯನ್ನು ಕೊಟ್ಟಿರುವ ಅವರನ್ನು ನಾನು ಒಬ್ಬ ಜೈನ ಮತದವರು ಎಂದು ಮೊದಲು ಭಾವಿಸಿದ್ದೆ !
ಎರಡನೆಯದಾಗಿ ಅವರ ಮಾತಿನ ಧಾಟಿ ಮತ್ತು ಪದಗಳನ್ನು ಬಳಸುವ ರೀತಿ ಅತ್ಯಾಕರ್ಷಕ. ಕನ್ನಡದಲ್ಲಿ ಇಷ್ಟು ಸೊಗಸಾಗಿ ಮಾತುಕತೆ ಆಡಲು ಹಾಗೂ ನಮ್ಮ ಭಾವನೆಗಳನ್ನು ಪ್ರತಿಕ್ರಯಿಸಲು ಸಾಧ್ಯವೇ ? ಎನ್ನುವ ವಿಶಯ ಗೋಚರಿಸುತ್ತದೆ.

ರಾಜರತ್ನಂ ಬರೆದ ‘ಬಣ್ಣದ ತಗಡಿನ ತುತ್ತೂರಿ’…… .. ಎಂಡಕುಡಕ್ ರತ್ನ….ಇತ್ಯಾದಿಗಳು ಎಲ್ಲರಿಗೂ
ಚಿರಪರಿಚಯ. ಅವರು ಜೈನ ಸಾಹಿತ್ಯದ ಬಗ್ಯೆಯೂ ವಿಪುಲವಾಗಿ ಬರೆದಿದ್ದಾರೆ. ಅವರ ಕವನ ಸಂಗ್ರಹದಿಂದ ಕೇವಲ ಕೆಲವು ಕವನಗಳೇ ಪುನರಾರ್ವರ್ತನೆಯಾಗುತ್ತಿವೆ. ಇನ್ನು ಹಲವು ವಿಶೇಷ ಕವನಗಳು, ಮನರಂಜನೆಗೆ ವ್ಯಂಜನಗಳಾಗಿವೆ. ನನಗೆ ಹಿಡಿಸಿದ ಒಂದು ಕವನದ ಗೊಂಚಲನ್ನು ಕೆಳಗೆ ಕೊಟ್ಟಿದ್ದೇನೆ. ಅದು ‘ತಿರುಮಂತ್ರ’ ಎಂಬ ಶೀರ್ಷಿಕೆಯಡಿಯಲ್ಲಿ ಇದೆ. ಓದಿ ಆನಂದಿಸಿ. ಇನ್ನೂ ಕೆಲವು ಕವನಗಳು ಸೊಗಸಾಗಿವೆ. ಓದಲು ಇಚ್ಛಿಸಿದರೆ, ಜಿ.ಪಿ.ರಾಜರತ್ನಂ, ಪ್ರಕಟಿಸಿದ ಪುಸ್ತಕ ‘ನಾಗನಪದಗಳು’, ವಿದೇಹ’, ೭೭೧, ೧೭ನೆ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರಿಗೆ ಬರೆದು ಪಡೆಯಿರಿ.

ಯಾಂಡಲ್ ಯಿಂಗ್ ಯಿಡೀಕ್ಕ !
ಶೀಟ್ ಮ್ಯಾಗ್ ಮಡೀಕ್ಕ !

ಐ…ನಾಚ್ ಕ್ಯಾಕೆ ಮಲ್ಲಿ ?
ಯಾರೆ ಔರ್ ಇಲ್ಲಿ ?
ತಿಂಗಳ್ ಇದ್ರೇನೇ ? ಸುತ್ತೆಲ್ಲ ಮಬ್ಬು.
ಬೇಕಾರೆ ನೀ ನನ್ನ ಯಿಂಗ್ ಇಲ್ಲೆ ತಬ್ಬು
ಪತ್ತೇನ್ ಆಗೊಲ್ಲ !
ನೋಡೋರ್ ಯಾರಿಲ್ಲ !

ಯಿಂಗ್ ಕುಂತರ್ ಎಂಗೆ ? ನಾ ಕಲಿಶಿ ಕೊಡಕ್ ಉಂಟ ?
ಯಾಕೆ ಪಿರಕೀ? ನಿಂಗೆ ಸಡಿಲನಾ ಸೊಂಟ ?
ನಂಬು ನಿನ ಪಕದಾಗ ನಾನ್ ಇರೋಗಂಟ-
ಮೀಶೆ ಮ್ಯಾಗ್ ಯಿಂಗ್ ಕೈಯಿ ! ಬೈಸಿಕಲು ಬಂಟ !

ಅಕ್ಕಳಿಸಿತು- ಎಳೆ -ಎಳಕೋ -ವೊಟ್ಟೇ- ವೊಳೀಕೆ !
ಮುಂಬಾರ ! ಅಯ್ ! ಅಷ್ಟು ಬಗ್ ಬ್ಯಾಡ್ ಕೆಳೀಕೆ !
ಆ ! ಅಂಗೆ ! ಕುದುರೆ ಮ್ಯಾಗ್ ಶಿಪ್ಪಾಯ್ ಕುಂತಂಗೆ !
ನಡದಿಂದ ಮ್ಯಾಗೆ ಮೈ ಇರಬೇಕ್ ನಿಂತಂಗೆ

ಇಲ್ಲಿ – ಈ ಕಾಲ್ ಇತ್ತ – ಇ ಪ್ಯಡಲ ಮ್ಯಾಗ್ ಆಕು ;
ಅಲ್ಲಿ – ಆ ಕಾಲ್ ತತ್ತ – ಆ ಪ್ಯಡಲ ತುಳಿ, ನೂಕು ;

ಇದು ಬಿರೇಕ್ – ಮುಟ್ಟ ಬ್ಯಾಡ್ ಇದನ್ !
ಮುಟ್ಟಿದರೆ ಯಿಕ್ ತೈತೆ ಮೊಕ್ಕೆ ಮೂರ್ ಒದೇನ !

ವಾಲ್ ಬ್ಯಾಡ ಅಂಗೆ ನನ ಮ್ಯಾಗೆ !
ಅದಕೆಲ್ಲ ವೊತ್ತು – ಇಳಿದ ಆ ಮ್ಯಾಗೆ !

ಕುಂತೀಯ ಬದ್ರ ?
ಕೈಯ ಬಿಡಲೀಯ ?
ಬೀಳೊ ವಂಗಾದ್ರೆ-
ಇಲ್ಲೀವ್ನಿ ಸಾಯ !

ಬಿಡಲಿಯಾ ? ಬಿಡತೀನಿ !
ಆ ! ಇದೋ ! ಬಿಟ್ಟೆ ! ಬಿಟ್ಟೆ !
ಎಲ ಮಲ್ಲಿ ! ಎನೆ ನೀನ್ ಇಂಗ್ ಓಗ್ತಿ-
-ವೋಗು ವಂಗ್ ಚಿಟ್ಟೆ !

ದುಂಬಿ ವೊದಂಗ್ ಓಗ್ತಿ, ಕಂಬ ಸುತ್ ದಂಗ್ ಸುತ್ತ್ ತಿ,
ಪ್ಯಡಲ ತುಳಿತುಳಿತಿ, ಸರ್ಕಸೇ ಮಾಡ್ ತಿ ;
ಯಾಂಡಲೇ ಕೈಬಿಡತಿ, ಆಚೀಚಿಗ್ ಇಂಗ್ ಆಡ್ ತಿ ;
ಕೈಯ ಕೊಟ್ಳಲ್ಲಪ್ಪೋ ನಂಗೆ ನನ್ ಯೆಡ್ ತಿ !

“ಸೈಕಲ್ಲ, ಮಾರಾಯ್ತಿ, ಕಲಿಸಿದೋರ್ ಯಾರೇ
ನಿಂಗೆ, ನನ ಗರತಿ ?”
“ಪ್ಯಾಟೆ ಅಣದೀರೆಲ್ಲ ಪಾಟಿ ಯೇಳೌರೆ
ನಂಗಿಲ್ಲಿ ನೂರಾರು ಸರತಿ “

ಮತ್ತೇನೆ ಮಡಗೀದಿ – ಭರತನಾಟ್ಯ ?
ಚಿಂತಿಲ್ಲ – ಯೇಳು ರಾಸ್ಯ “
ಯೇಳೋವ ಕೇಳೋವ -ಸಮಯ ಬತ್ತೈತೆ-
ಈಗ ಸಾಕೇಳಿ ಅಸ್ಯ.”

‘ಬತ್ತೀರ ಒಂದು ಕೈ ? ಡಬ್ಬಲ್ ಸವಾರೀ !”
ಬಾರ್ ಮ್ಯಾಗೆ ? ಊಂರೀ ನಿಜಾ ರೀ !”
” ಸದ್ಯ ಕತ್ಲಾಗ್ ಕಳದೆ ನನ್ನ ಮರುವಾದಿ !
ಬರದಿದ್ರೆ ಬಿಟ್ಟೀಯಾ ಬಜಾರಿ !”

ಶತಮಾನದ ಕಾವ್ಯ’ ದಿಂದ, ಶ್ರೀ. ಜೀ.ಪಿ.ರಾಜರತ್ನಂ, ಅವರ ಕವಿತೆಗಳಲ್ಲಿ ನನಗೆ ‘ಪ್ರಿಯವೆನಿಸಿದ’ ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದ್ದೇನೆ.
ಸಂಪಾದಕರು: ಶ್ರೀ. ಎಚ್. ಎಸ್. ವೆಂಕಟೇಶಮೂರ್ತಿಗಳು.
ಹೆಸರಾಂತ ಕವಿ, ರಾಜರತ್ನಂ ಕವಿತೆಗಳಲ್ಲಿ ರಸಿಕತೆಗೇನೂ ಕಡಿಮೆ ಇಲ್ಲ ! ಮಲ್ಲಿಯ ಮೇಲಿನ ಪ್ರೀತಿ, ಗೌರವ, ಹಾಗೂ ಮೆಚ್ಚುಗೆಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು !

‘ನಲ್ಲೀ ತಾವ್ ನಂ ಮಲ್ಲೀ’-

ಜಿ. ಪಿ.ರಾಜರತ್ನಂ ರವರ ಕವನ, ಮತ್ತೊಮ್ಮೆ ಮೆಲುಕುಹಾಕಲು ಮುದಕೊಡುತ್ತದೆ !

“ನಲ್ಲೀ ತಾವ್ ನಂ ಮಲ್ಲೀ”
ನಿಂತ್ರೊಂ ಚಂದ ! ಕುಂತ್ರೊಂ ಚಂದ !
ನಡೀತಾ ನಿದ್ರ್, ಒಂ ಚಂದ !
ಮಲ್ಲಿ ಚೌರ್ಗೆ ಬೆಳೆಗೋದ್ ಚಂದ !

ನೀರ್ ತುಂಬೋದೂ ಚಂದ !
ತುಂಬೀದ್ ಚೌರ್ಗೆನ್ ವೂ ಎತ್ ದಂಗೆ
ಸೊಂಟ್ದಾಗ್ ಸಿಗ್ಸೋದ್ ಚಂದ !
ನಿರೀನ್ ಇಂಕ್ರ ನೆನೆಸ ದಂಗೇನೇ

ಚಿಮ್ತಾ ಬರೋದೆ ಚಂದ !
ಮಲ್ಲಮ್ಮ- ನನ್ ಮಕ್ಕಳ್ ತಾಯಿ !
ಮಲ್ಲೀ- ನಂಗ್ ಔಳ್ ಯೆಂಡ್ರು !
ನಂ ಪ್ಯಾಟೇಗ್ ಔಳೇ ಪಾಳೇಗಾತಿ !

ಯಿಂತೋಳನ್ ಯಾರ್ ಕಂಡ್ರು !
ಮಿಕ್ಕೋರ್ ಯಾರಾರ್ ‘ಮಲ್ಲೀಂ’ ತಂದ್ರೆ
ಅಲ್ ಉದರಿಸ್ ಬುಟ್ಟಾಳು !
ನಾನ್ ಅನಬೈದು – ನಂಗ್ ಅವಳ್ ಯೆಂಡ್ರು !
ಸಲ್ಗೆ- ನಂಗೆ ಏನ್ ಯೇಳು !